ಸೋಮವಾರ, ಫೆಬ್ರವರಿ 13, 2012

ಸಂಗಾತಿ

ನಾ 
ನಡೆವ ದಾರಿಯಲ್ಲಿ 
ಮುಳ್ಳುಗಳಿವೆ 
ಏರು - ತಗ್ಗುಗಳಿವೆ 
ಕಾರ್ಗತ್ತಲಿದೆ 
ಎಂದು ಗೊತ್ತಿದ್ದರೂ 
ನೀ
ನನಗೆ ಜೊತೆಯಾದೆ...

ನಿನ್ನ 
ಮುಗಿಲಾಚೆಗಿನ 
ಕನಸನ್ನು 
ನಾ
ತರಲಾರೆ 
ಎಂದು ಗೊತ್ತಿದ್ದರೂ 
ನನ್ನೊಡನೆ
ಹಸಮಣೆಯೇರಿದೆ...

ನೀ 
ಆಡುವಾಗ ಕಳಕೊಂಡ 
ಕಪ್ಪೆ ಚಿಪ್ಪುಗಳ 
ನಾ
ತರಲಾರೆ 
ಎಂದು ಗೊತ್ತಿದ್ದರೂ
ನನ್ನೊಡನೆ
ಬಾಳ ನೌಕೆಯೇರಿದೆ...

ನೀ
ಬಯಸಿದ
ಸುಂದರ ಸಂಜೆಗಳ
ನಾ
ಕೊಡಲಾರೆನೆಂದು
ಗೊತ್ತಿದ್ದರೂ
ಶಬರಿಯಂತೆ ಕಾದೆ...

ನೀ
ಕಲ್ಪಿಸಿದ
ಪುಷ್ಪ ಫಥದಲ್ಲಿ
ನಾ
ಚಲಿಸಲಾರೆನೆಂದು
ಗೊತ್ತಿದ್ದರೂ
ಸೀತೆಯಂತೆ ಹಿಂಬಾಲಿಸಿದೆ...

ನಿನ್ನ
ತ್ಯಾಗಕ್ಕೆ ಬದಲಾಗಿ
ನಾನೇನು ಕೊಡಬಲ್ಲೆ ?
ಎಂದೂ ಮರೆಯದ ಸವಿ ಮುತ್ತು
ತುಂಬು ಹೃದಯದ ಪ್ರೀತಿ
ಮತ್ತು
ನಿನ್ನಾ ಕಣ್ಣೀರು ನೆಲ ಮುಟ್ಟದಂತೆ
ತಡೆಯುವುದರ ಹೊರತು...

- ಈಶ್ವರ ಪ್ರಸಾದ.

8 ಕಾಮೆಂಟ್‌ಗಳು:

 1. ಬಯಸಿ ಬಂದವಳಿಗೆ ಹಿಡಿ ಪ್ರೀತಿಯೇ ಸಾಕು ಗೆಳೆಯಾ........
  ಎಂದೆಂದೂ ಜೊತೆಗಿರು ನನ್ನಿನಿಯಾ.........

  ಅಂತ ಹೆಣ್ಣು ಬಯಸುತ್ತಾಳೆ.

  ಚಂದದ ಕವನ!

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಹೌದು ಪ್ರವೀಣ್ .. .ಅದಕ್ಕೇ ಅಲ್ಲವೇ ಪ್ರೀತಿ ಶಾಶ್ವತ ಎನ್ನುವುದು.
   ನಿಮ್ಮ ಮೆಚ್ಚುಗೆಯ ನುಡಿಗೆ ಧನ್ಯವಾದಗಳು.

   ಅಳಿಸಿ
 2. ಈಶ್ವರ್ ಬಾಳಸಂಗಾತಿ ಹಲವಾರು ಕೊಡು-ತಗೋ ಗಳಿಗೆ ಹೊಮ್ದಿಕೊಳ್ಲಬೇಕಲ್ಲವೇ ಹಾಗಾಗಿ ಇಬ್ಬರಲ್ಲೂ ಈ ಗುಣ ಇದ್ದರೆ ಅದು ಸಾರ್ಥಕ ಜೀವನ ಆಗುತ್ತೆ, ಅದೇ ಭಾವಾರ್ಥದ ಕವನ ಚನ್ನಾಗಿ ಮೂಡಿ ಬಂದಿದೆ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಅಜಾದ್ ಸರ್.. ಬಾಳ ಸಂಗಾತಿ ಬಗೆಗಿನ ನಿಮ್ಮ ವಿಚಾರ ತುಂಬಾ ಸತ್ಯವಾದುದು.
   ಕವಿತೆಯನ್ನು ಮೆಚ್ಚಿ ಬರೆದಿದ್ದಕ್ಕೆ ಧನ್ಯವಾದಗಳು.

   ಅಳಿಸಿ
 3. ಚಂದದ ಕವನ... ನಿಜವಾದ ಪ್ರೀತಿಯಲ್ಲಿ ಹೊಂದಾಣಿಕೆ ಇರಲೇ ಬೇಕಲ್ಲವೇ ? ...ಧನ್ಯವಾದಗಳು....

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಅಶೋಕ್ ಸರ್ ... ಕವನವನ್ನು ಮೆಚ್ಚಿ ಬರೆದಿದ್ದಕ್ಕೆ ಧನ್ಯವಾದಗಳು.
   ಹೌದು ಪ್ರೀತಿ ನಿಂತಿರುವುದು ನೀವಂದಂತೆ ಹೊಂದಾಣಿಕೆ ಮತ್ತು ವಿಶ್ವಾಸದಲ್ಲಿ ಮಾತ್ರ.

   ಅಳಿಸಿ