ಶನಿವಾರ, ಫೆಬ್ರವರಿ 4, 2012

ನನ್ನ ಜಪಾನ್ ಪಯಣ...


ನೂರಾರು ಕಷ್ಟಗಳ ಮದ್ಯೆ ಎದ್ದು ನಿಂತು, ಸಾಧನೆ ಎಂದರೆ ಎನೆಂಬುದಕ್ಕೆ ಒಂದು ಜ್ವಲಂತ ಸಾಕ್ಷಿಯಾಗಿರುವ ದೇಶ ಜಪಾನ್. ಮನುಷ್ಯ ಮೆಷಿನ್ ಆವಿಷ್ಕಾರ ಯಾಕೆ ಮಾಡಿದ ಎಂದರೆ ೩ ನೇ ಕ್ಲಾಸ್ ನ ಹುಡುಗ ಬೇಕಾದರು ಹೇಳ್ತಾನೆ , ಮನುಷ್ಯನ ಕಷ್ಟ ಕಡಿಮೆ ಮಾಡಲು ಅಂತ. ಹಾಗಿದ್ದ ಮೇಲೂ ಎಷ್ಟೋ ದೇಶಗಳಲ್ಲಿ ಮನುಷ್ಯ ಇನ್ನೂ ಯಾಕೆ ಕಷ್ಟ ಪಡುತ್ತಾ ಇದ್ದಾನೆ ? ಈ ಪ್ರಶ್ನೆಗೆ ಉತ್ತರಿಸೋದು ಬಹುಶ ಭಾರತದಂತ ದೇಶದಲ್ಲಿ ತುಂಬ ಕಷ್ಟ. ಆದರೆ ಜಪಾನ್ ನಲ್ಲಿ ಇಂಥ ಪ್ರಶ್ನೆಯೇ ಉದ್ಭವಿಸದು ಎಂದರೆ ನಿಮಗೆ ಆಶ್ಹರ್ಯ ಆಗುವುದಿಲ್ಲವೇ ? ಹೌದು ಜಪಾನ್ ಗೆ ಬಂದಾಗ ಮೊದಲು ಕಾಣುವ ವಿಷಯ ಇಲ್ಲಿನ ಜನ ತಮ್ಮ ಆವಿಷ್ಕಾರಗಳನ್ನು ಅದೆಷ್ಟು ಚೆನ್ನಾಗಿ ತಮ್ಮ ದಿನಬಳಕೆಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬುದು. ನನ್ನ ಮುಂದಿನ ಲೇಖನಗಳಲ್ಲಿ ಈ ವಿಷಯವನ್ನು ವಿವರಿಸುತ್ತೇನೆ ಬಿಡಿ. ಮತ್ತೆ ಜಪಾನ್ ನಲ್ಲಿ ನನ್ನನ್ನು ಆಕರ್ಷಿಸಿದ್ದು ವಿಸ್ತಾರವಾದ ರೈಲ್ವೆ ನೆಟ್ವರ್ಕ್. ಇಲ್ಲಿ ಯಾವ ತರದ ಟ್ರೈನ್ ಗಳು ಇಲ್ಲ ಹೇಳಿ? ನಮ್ಮ ಕೋಲ್ಕತ್ತಾ ದಲ್ಲಿ ಕಾಣುವ ಟ್ರಾಮ್ ನಿಂದ ಪ್ರಾರಂಬಿಸಿ ವಿಮಾನಕ್ಕೆ ಚಾಲೆಂಜು ಹಾಕೋ ಬುಲ್ಲೆಟ್ ಟ್ರೈನ್ ಗಳು ಇವೆ. ರೋಮಾನ್ಸ್ ಕಾರ್ ಗಳಿವೆ. ಡ್ರೈವರ್ ಲೆಸ್ ರೈಲ್ ಗಳಿವೆ... ಮುಂದೆ ಇಲ್ಲಿನ ಜನ, ಇವರ ಭಾಷೆ, ಇವರ ನಡೆ, ಇಲ್ಲಿನ ದೇವಸ್ಥಾನಗಳು, ಶ್ರೈನ್ ಗಳು, ೪ ಸೀಸನ್ ಗಳು, ಸುಂದರ ಪ್ರಕೃತಿ, ಐಲ್ಯಾಂಡ್ಗಳು,  ನೈಟ್ ಲೈಫ್, ಹಬ್ಬಗಳು, ಆಟಗಳು... ಇನ್ನು ಏನೇನೋ ಇದೆ. ಎಲ್ಲವನ್ನೂವಿಸ್ತಾರವಾಗಿ ಮುಂದಿನ ದಿನಗಳಲ್ಲಿ ಬರೆಯುತ್ತೇನೆ...

- ಈಶ್ವರ ಪ್ರಸಾದ.              

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ