ಬಂದ ಬಿಳಿ ಹನಿಯು ನೀನೇನಾ
ಕರಿ ಗತ್ತಲ ಹಿಂದಿಕ್ಕಿದ
ಬೆಳ್ಳಿ ಚಂದಿರ ನೀನೇನಾ
ಬರಡಾದ ಭೂಮಿಯಲ್ಲಿ
ಹಸಿರು ತಂದವಳು ನೀನೇನಾ
ಬತ್ತಿದ ನದಿಯಲ್ಲಿ
ಜರಿ ಹರಿಸಿದವಳು ನೀನೇನಾ
ಹೊತ್ತುವ ಬಿಸಿಲಲ್ಲಿ
ತಂಗಾಳಿ ಬೀಸಿದವಳು ನೀನೇನಾ
ಚುಚ್ಚುವ ದ್ವೇಷ ದಲಿ
ಪ್ರೀತಿಯೊರತೆ ಕೊಟ್ಟವಳು ನೀನೇನಾ
ಬಣ್ಣ ಸತ್ತ ಕಣ್ಣುಗಳಲಿ
ಕಾಮನ ಬಿಲ್ಲ ಬರೆದವಳು ನೀನೇನಾ
ನೋವಿನ ಬುಡದಿಂದ
ನಲಿವ ಚಿಮ್ಮಿಸಿದವಳು ನೀನೇನಾ
ಗುರಿಯಿರದ ಬಾಳಿಗೆ
ನೆಲೆ ಕಾಣಿಸಿದವಳು ನೀನೇನಾ
ನನ್ನ ಹೃದಯ ಕದ್ದು
ಗೆದ್ದವಳು ಎಂದೆಂದೂ ನೀನೇನಾ
- ಈಶ್ವರ ಪ್ರಸಾದ
- ಈಶ್ವರ ಪ್ರಸಾದ
kavana ella laayika iddu Prasada. Ninage kavana ella baravale edittu heli enage gonte ittille..Very nice..Keep it up.
ಪ್ರತ್ಯುತ್ತರಅಳಿಸಿಥ್ಯಾಂಕ್ಸ್ ರಾಘವ ಚಿಕ್ಕಪ್ಪ.
ಪ್ರತ್ಯುತ್ತರಅಳಿಸಿನಾನು ಮೊದಲೇ ಸಣ್ಣ ಸಣ್ಣ ಕವನ ಬರೀತಿದ್ದೆ (ಜಾಸ್ತಿ ಚುಟುಕುಗಳು)
ಹೀಗೆ ಓದ್ತಾ ಪ್ರೋತ್ಸಾಹಿಸುತ್ತಿರಿ.
Kavana bhari laikiddu. Odi kushi athu.
ಪ್ರತ್ಯುತ್ತರಅಳಿಸಿಥ್ಯಾಂಕ್ಸ್ ಸುಷ್ಮಾ ಅತ್ತಿಗೆ
ಪ್ರತ್ಯುತ್ತರಅಳಿಸಿ