ಶನಿವಾರ, ಫೆಬ್ರವರಿ 4, 2012

ನನ್ನ ನಲ್ಲೆಗೆ...

ಕರಿ ಮೋಡದ ಮರೆ ಯಲ್ಲಿ
ಬಂದ ಬಿಳಿ ಹನಿಯು ನೀನೇನಾ
ಕರಿ ಗತ್ತಲ ಹಿಂದಿಕ್ಕಿದ
ಬೆಳ್ಳಿ ಚಂದಿರ ನೀನೇನಾ
ಬರಡಾದ ಭೂಮಿಯಲ್ಲಿ
ಹಸಿರು ತಂದವಳು ನೀನೇನಾ
ಬತ್ತಿದ ನದಿಯಲ್ಲಿ
ಜರಿ ಹರಿಸಿದವಳು ನೀನೇನಾ
ಹೊತ್ತುವ ಬಿಸಿಲಲ್ಲಿ
ತಂಗಾಳಿ ಬೀಸಿದವಳು ನೀನೇನಾ
ಚುಚ್ಚುವ ದ್ವೇಷ ದಲಿ
ಪ್ರೀತಿಯೊರತೆ ಕೊಟ್ಟವಳು ನೀನೇನಾ
ಬಣ್ಣ ಸತ್ತ ಕಣ್ಣುಗಳಲಿ
ಕಾಮನ ಬಿಲ್ಲ ಬರೆದವಳು ನೀನೇನಾ
ನೋವಿನ ಬುಡದಿಂದ
ನಲಿವ ಚಿಮ್ಮಿಸಿದವಳು ನೀನೇನಾ
ಗುರಿಯಿರದ ಬಾಳಿಗೆ
ನೆಲೆ ಕಾಣಿಸಿದವಳು ನೀನೇನಾ
ನನ್ನ ಹೃದಯ ಕದ್ದು
ಗೆದ್ದವಳು ಎಂದೆಂದೂ ನೀನೇನಾ

- ಈಶ್ವರ ಪ್ರಸಾದ 

4 ಕಾಮೆಂಟ್‌ಗಳು:

  1. kavana ella laayika iddu Prasada. Ninage kavana ella baravale edittu heli enage gonte ittille..Very nice..Keep it up.

    ಪ್ರತ್ಯುತ್ತರಅಳಿಸಿ
  2. ಥ್ಯಾಂಕ್ಸ್ ರಾಘವ ಚಿಕ್ಕಪ್ಪ.
    ನಾನು ಮೊದಲೇ ಸಣ್ಣ ಸಣ್ಣ ಕವನ ಬರೀತಿದ್ದೆ (ಜಾಸ್ತಿ ಚುಟುಕುಗಳು)
    ಹೀಗೆ ಓದ್ತಾ ಪ್ರೋತ್ಸಾಹಿಸುತ್ತಿರಿ.

    ಪ್ರತ್ಯುತ್ತರಅಳಿಸಿ