ಶುಕ್ರವಾರ, ಮಾರ್ಚ್ 23, 2012

ಜಾಡ್ಯ

ಉಸುಬು ತುಂಬಿದ ದಾರಿ
ಕುಸಿಯುತ್ತಿದ್ದರೂ
ಅಲ್ಲೇ ನಡೆವ ತವಕ
ಮುಳುಗುತ್ತಿದ್ದರೂ
ಅಲ್ಲೇ ಸಾಗುವ ಸೆಳೆತ
ಬಳಲಿ ಬೆಂಡಾದರೂ
ಮತ್ತಲ್ಲೇ ಬೆಂಬತ್ತುವ ಬಯಕೆ

ಉತ್ಸಾಹವಿರದಿದ್ದರೂ
ಬಡಕಲಾಗೆ ಮುಂದೊಡಿಸುವ ಚಿತ್ತ
ಹೊಸದೇನು ಕಾಣದಾದರೂ
ಹಳೆ ಗಾಣವನ್ನೇ ಸುತ್ತುವ ಮನ
ಸ್ವಂತಿಕೆಯ ಹುಡುಕಲಾರದೆ
ಅಪ್ಪ ನೆಟ್ಟುದ್ದಕ್ಕೇ ಜೋತು ಬೀಳುವ ದೇಹ
ಹಗಲಾದರೆ ಕೆಲಸ, ಕತ್ತಲಾದರೆ ನಿದ್ದೆ
ದೂಡುತ್ತಲೇ ಕಳೆವ ದಿನ

ಎಂದು ಬರಲಿದೆ ಇಲ್ಲಿ ಸೂರ್ಯನುದಯ ?
ಉಸುಬೇ ಇರದ ನಾಡೊಂದರ ಉದಯ ?

- ಈಶ್ವರ ಪ್ರಸಾದ.

2 ಕಾಮೆಂಟ್‌ಗಳು:

 1. ಉಸುಬು ತುಂಬಿದ ದಾರಿ
  ಕುಸಿಯುತ್ತಿದ್ದರೂ
  ಅಲ್ಲೇ ನಡೆವ ತವಕ
  ಮುಳುಗುತ್ತಿದ್ದರೂ
  ಅಲ್ಲೇ ಸಾಗುವ ಸೆಳೆತ
  ಬಳಲಿ ಬೆಂಡಾದರೂ
  ಮತ್ತಲ್ಲೇ ಬೆಂಬತ್ತುವ ಬಯಕೆ
  ಈ ಸಾಲುಗಳು ತುಂಬಾ ಇಷ್ಟವಾಯ್ತು .. ಚೆನ್ನಾಗಿದೆ

  ಪ್ರತ್ಯುತ್ತರಅಳಿಸಿ